ಧೀಮಂತರ ಸಾವು: ಗುಣಸ್ವಭಾವ ಹಾಗೂ ಲೋಕದೃಷ್ಟಿಯ ನೆಲೆಯಿಂದ ಒಂದೇ ಚೌಕಟ್ಟಿನಲ್ಲಿ ಹಿಡಿದಿಡುವುದು ಕಷ್ಟವೆನಿಸುವಷ್ಟು ಇಲ್ಲಿರುವ ವ್ಯಕ್ತಿಗಳು ಬಹುರೂಪಿಗಳು. ಆದರೂ ಇವರಲ್ಲಿ ಸಾಕಷ್ಟು ಸಮಾನ ಅಂಶಗಳಿವೆ. ಹೆಚ್ಚಿನವರು ಮಾನವೀಯ ಮಿಡಿತವಿದ್ದವರು. ಸಾತ್ವಿಕ ಆಕ್ರೋಶ ತುಂಬಿಕೊಂಡಿದ್ದವರು. ಸಮಾನತೆಯ ಕನಸಿದ್ದವರು. ಆಸುಪಾಸಿನ ಸಮಾಜ ಬದಲಾಗಬೇಕೆಂದು ಚಡಪಡಿಸಿದವರು. ಬಿಕ್ಕಟ್ಟಿನ ಕಾಲದಲ್ಲಿ ತಮ್ಮೊಳಗಿದ್ದ ಕಸುವನ್ನು ಸುರಿದ ಕ್ರಿಯಾಶೀಲರು. ಧೀಮಂತರು. ಧೀಮಂತರ ಸಾವಿಗೆ ಯಾವತ್ತೂ ಪೂರ್ಣವಿರಾಮ ಇರುವುದಿಲ್ಲ. ಬಾಬಾಸಾಹೇಬರ ಚಿಂತನೆಗಳು ಅವರು ದೇಹಬಿಟ್ಟ ಅರ್ಧಶತಮಾನದ ಬಳಿಕ ಹೇಗೆ ದೇಶದ ಸಾಮಾಜಿಕ-ರಾಜಕೀಯ ಬದುಕನ್ನು ಬಿರುಗಾಳಿಯಂತೆ ಆವರಿಸಿಕೊಳ್ಳುತ್ತಿವೆ ಎಂಬುದಕ್ಕೆ ನಮ್ಮ ತಲೆಮಾರು ಸಾಕ್ಷಿಯಾಗಿದೆ.











Reviews
There are no reviews yet.