ಮುಟ್ಟಿಸಿ ಕೊಂಡವರು

ಡಾ. ಬಿ.ಎಂ ತಿಪ್ಪೇಸ್ವಾಮಿ ನೆನಪು

Only 1 left in stock

Original price was: ₹350.00.Current price is: ₹315.00.

or

ಭಾರತದಂತಹ ಬಹುಮುಖದ ಬಹು ಸ್ತರದ ದೇಶದಲ್ಲಿ ತಿಪ್ಪೇಸ್ವಾಮಿಯಂಥವರು ಬದುಕಿದ್ದೆ ಒಂದು ಕುತೂಹಲಕರ ವಿಷಯವಾಗಬಲ್ಲದು. ಅವರು ಅಕ್ಷರದಿಂದ ವಂಚಿತರಾದ ಜಾತಿ ಪದ್ಧತಿಗೂ ಕ್ರೂರ ವ್ಯವಸ್ಥೆಯ ಹೊರಗೆ ಉಳಿದಿದ್ದ ಪಂಚಮ ಸಮುದಾಯದಿಂದ ಬಂದವರು. ಅಂಥವರು ತಮ್ಮ ಹುಟ್ಟೂರನ್ನು ಬಿಟ್ಟು ಅಕ್ಕನ ಊರಿಗೆ ಹೋಗಿ ಶಾಲೆಗೆ ಸೇರದಿದ್ದರೆ, ಅಲ್ಲಿ ಕೂಡ ಜನರ ಅಸೂಯೆ ಅವಮಾನಗಳನ್ನು ಸಹಿಸಿಕೊಂಡು ವಿದ್ಯೆಗಳಿಸಲೇಬೇಕೆಂಬ ನಿಶ್ಚಲ ಗುರಿಯಿಂದ ಮುಂದುವರಿಯದಿದ್ದರೆ ತಿಪ್ಪೇಸ್ವಾಮಿ ತಮ್ಮ ಹುಟ್ಟಿದೂರಾದ ಹಿರೇಹಳ್ಳಿಯಲ್ಲಿ ದನ ಕಾಯುತ್ತ ಜೀವನ ಸಾಗಿಸಬೇಕಾಗುತ್ತಿತ್ತು. ಆದರೆ 20ನೇ ಶತಮಾನದ ಭಾರತದ ಅಲ್ಲೋಲ ಕಲ್ಲೋಲ ಸಾಮಾಜಿಕ ವಾತಾವರಣದಲ್ಲಿ ತಿಪ್ಪೇಸ್ವಾಮಿಯವರು ಅನ್ಯ ಜಾತಿಯವರಿಂದ ಪಡೆದ ಸಹಕಾರ ಪ್ರೀತಿ ನಿರ್ಲಕ್ಷ್ಯ ಅವಮಾನ ಇತ್ಯಾದಿಯ ದಾಖಲೆಯೇ ಒಂದು ಬೃಹತ್ ಕೃತಿಗೆ ವಸ್ತುವಾಗಬಲ್ಲದು. ಯಾಕೆಂದರೆ ತಿಪ್ಪೇಸ್ವಾಮಿ ಜಟಿಲ ಪರಿಸರದಲ್ಲಿ ವಿಶಿಷ್ಟ ಜೀವನ ಶೈಲಿ ಸಾಮಾಜಿಕ ಕಾಳಜಿಯನ್ನು ಆರಿಸಿಕೊಂಡವರು….

Reviews

There are no reviews yet.

Only logged in customers who have purchased this product may leave a review.

Related Products