ಭಕ್ತಿ ಚಳವಳಿಯ ತೀವ್ರಗಾಮಿ ಸಂತ ರವಿದಾಸ್ (ಕ್ರಿ.ಶ. 1450-1520) ತನ್ನನ್ನು ತಾನು ‘ಈಗ ಸ್ವತಂತ್ರನಾಗಿರುವ ಚಮ್ಮಾರ’ ಎಂದು ಕರೆದುಕೊಳ್ಳುತ್ತಾನೆ. ತನ್ನ “ಬೇಗಂಪುರ” ಹಾಡಿನಲ್ಲಿ ಭಾರತೀಯ ಆದರ್ಶರಾಜ್ಯವನ್ನು ಒಂದು ಆಧುನಿಕ ಜಾತಿರಹಿತ, ವರ್ಗರಹಿತ, ತೆರಿಗೆ-ಮುಕ್ತ ನಗರವನ್ನು ಮೊದಲು ಕಲ್ಪಿಸಿಕೊಂಡವನು. ಇದು ಬ್ರಾಹ್ಮಣೀಯ ಕಲಿಯುಗದ ನರಕಸದೃಶ ಕಲ್ಪನೆಗೆ ವ್ಯತಿಲಕ್ತವಾಗಿತ್ತು. ಭಾರತವನ್ನು ‘ಪುನಃಶೋಧಿಸಲು. ಪೌರಸ್ಯವಾದಿ, ರಾಷ್ಟ್ರೀಯವಾದಿ ಮತ್ತು ಹಿಂದುತ್ವವಾದಿ ಪ್ರವೃತ್ತಿಗಳನ್ನು ತಿರಸ್ಕರಿಸುತ್ತಾ, ಗೇಲ್ ಓಮೈಟ್ ಅವರು ಐದು ಶತಮಾನಗಳ ಅವಧಿಯಲ್ಲಿ ವ್ಯಾಪಿಸಿಕೊಂಡಿರುವ ತಳಸ್ತರೀಯ ದಾರ್ಶನಿಕರ ವಿಶ್ವ ದೃಷ್ಟಿಕೋನವನ್ನು ಒಟ್ಟುಗೂಡಿಸಿ ಇಲ್ಲಿ ನೀಡಿದ್ದಾರೆ – ಚೋಖಾಮೇಳ, ಜನಾಬಾಯಿ, ಕಬೀರ್, ರವಿದಾಸ್, ತುಕಾರಾಂ, ಕರ್ತಾಭಜ, ಫುಲೆ, ಅಯೋತಿ ದಾಸ್, ಪಂಡಿತಾ ರಮಾಬಾಯಿ, ಪೆರಿಯಾರ್, ಅಂಬೇಡ್ಕರ್ ಇವರ ದೃಷ್ಟಿಕೋನವು ಗಾಂಧಿಯವರ ರಾಮರಾಜ್ಯ ಆದರ್ಶದ ಗ್ರಾಮರಾಜ್ಯ, ನೆಹರು ಅವರ ಹಿಂದುತ್ವ-ಲೇಪಿತ ಬ್ರಾಹ್ಮಣೀಯ ಸಮಾಜವಾದ ಮತ್ತು ಸಾವರ್ಕರ್ ಅವರ ಪ್ರದೇಶವಾದಿ ಹಿಂದೂ ರಾಷ್ಟ್ರ ಪಲಕಲ್ಪನೆಗಳಿಗೆ ವ್ಯತಿಲಕ್ತವಾಗಿದೆ. ತಾರ್ಕಿಕತೆ ಮತ್ತು ಭಾವಪರವಶತೆ-ಜ್ಞಾನ ಮತ್ತು ಭಕ್ತಿಗಳ ಪಥವು ‘ವಾಗ್ದಾನಿತ’ ನಾಡಿಗೆ ಕರೆದೊಯ್ಯುತ್ತದೆ.










Reviews
There are no reviews yet.