ಅಕಾಡೆಮಿ ಪ್ರಶಸ್ತಿಗಳನ್ನು ಗಳಿಸಿರುವ ಮಹತ್ವದ ಕಾದಂಬರಿ. ಯಶವಂತ ಚಿತ್ತಾಲರ ಈ ಬೃಹತ್ ಕೃತಿ ಕನ್ನಡ ಕಾದಂಬರಿಯ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಇಂದು, ಜೀವನ ಹಾಗೂ ಸಾಹಿತ್ಯಗಳೆರಡನ್ನೂ ದಿಕ್ಕು ತಪ್ಪಿಸುತ್ತಿರುವ ನಿಷ್ಠುರ ಸಮಸ್ಯೆಗಳನ್ನು ಕುರಿತ ಸೃಜನಶೀಲ ಧ್ಯಾನದ ಫಲವಾದ ‘ಪುರುಷೋತ್ತಮ’, ಕಾದಂಬರಿ ಪ್ರಕಾರದ ಕ್ಷಿತಿಜಗಳನ್ನು ವಿಸ್ತರಿಸುವ ಚೇತೋಹಾರಿ ಪ್ರಯತ್ನವಾಗಿದೆ. ಪುಟಪುಟದಲ್ಲೂ ಚಿತ್ತಾಲರ ಶೈಲಿಯ ಅಂಕಿತವುಳ್ಳ ಬರವಣಿಗೆ ಒಂದು ನೆಲೆಯಲ್ಲಿ ಅತ್ಯುತ್ತಮ ಕಾವ್ಯಕ್ಕೆ ಸಂವಾದಿಯಾದರೆ ಮತ್ತೊಂದು ನೆಲೆಯಲ್ಲಿ ಕನ್ನಡ ಕಥನಕಲೆ ಸಾಧಿಸಿರುವ ಪ್ರಬುದ್ಧತೆಗೆ ಸಾಕ್ಷಿಯಾಗಿದೆ. ಜೊತೆಗೇ ಇಲ್ಲಿಯ ಅದ್ಭುತ ಪಾತ್ರಸೃಷ್ಟಿಯ ಹಿಂದೆ ಕೆಲಸ ಮಾಡಿದ ಅಪೂರ್ವ ಸೃಜನಪ್ರತಿಭೆಗೆ ಕೂಡ.











Reviews
There are no reviews yet.