ನನ್ನ ಬಾಲ್ಯದಲ್ಲಿ ನನ್ನನ್ನು ಗಾಢವಾಗಿ ಕಾಡಿ ನನ್ನೊಳಗೆ ಅತ್ಯಂತ ಆಪ್ತವಾಗಿ ಉಳಿದು ಸದಾ ಉರಿಯುತ್ತಿರುವ ಹತ್ತಾರು ಮೂರ್ತಿಗಳಲ್ಲಿ ಇವನೂ ಒಬ್ಬ, ಊರಿನ ಪಾಲಿಗೆ ಅತಿ ಸಾಮಾನ್ಯನೆನಿಸಿದ್ದ ವ್ಯಕ್ತಿ ಅಂದು ನನ್ನ ಮುಗ್ಧ ಮನಸ್ಸಿಗೆ ಅಸಾಮಾನ್ಯ ಹಾಗೂ ಅದ್ಭುತವೆನಿಸಿದ್ದಂತೆ ಇವತ್ತೂ ಜ್ವಲಂತವಾಗಿ ಅನ್ನಿಸಿದ್ದೇ ಈ ಕೃತಿಸೃಷ್ಟಿಗೆ ಮುಖ್ಯ ಕಾರಣ. ಹಿಂದುಳಿದ ಹಳ್ಳಿಯೊಂದರ ಪ್ರಾಚೀನ ಬದುಕಿಗೆ ಗೆಂಡೆತಿಮ್ಮ ಮರಂಕಿಯರು ಪರಿಚಯಿಸಿದ ನಾಗರಿಕ ವಸ್ತುಗಳು ಮತ್ತು ಅವರ ಮುಗ್ಧ ಕ್ರಿಯೆಗಳು ದುರಂತವೆನಿಸಿದರೂ ಅನಿವಾರ ವಿಕಾಸಕ್ಕೆ ಕಾರಣವಾದಂತೆ ಅವರಿಬ್ಬರ ವೈಯಕ್ತಿಕ ಜೀವನವನ್ನು ಬಲಿ ತೆಗೆದುಕೊಂಡುಬಿಟ್ಟವು. ನನ್ನ ಈ ಇಷ್ಟಮೂರ್ತಿಗಳ ವಿಗ್ರಹಗಳ ಕೆತ್ತನೆ ಎಷ್ಟೇ ಒರಟಾಗಿದ್ದರೂ, ಗ್ರಾಮ್ಯವೆನಿಸಿದ್ದರೂ ಈ ಶಿಲ್ಪಗಳು ನನಗೆ ಅನನ್ಯ ಹಾಗೂ ಪ್ರಿಯವಾದ ಅನುಭವವನ್ನುಂಟು ಮಾಡಿದಂತೆ ಸಹೃದಯರಿಗೂ ಉಂಟುಮಾಡಬಹುದೆಂಬ ಅಭಿಲಾಷೆ ನನಗಿದೆ.











Reviews
There are no reviews yet.