ನಾಲ್ವಡಿಯವರನ್ನು ಕೇಂದ್ರವಾಗಿರಿಸಿಕೊಂಡ ಹಲವು ನಿರೂಪಣೆಗಳು ಕನ್ನಡದಲ್ಲಿವೆ. ಅದರಲ್ಲೂ ಕಳೆದ ಕೆಲವು ದಶಕಗಳಲ್ಲಿ ಈ ನಿರೂಪಣೆಗಳು ಮಾಹಿತಿಗಳನ್ನು ಉತ್ತೇಕ್ಷಿಸುವ ನೆಲೆಗಳಿಗೆ ದಾಟಿವೆ. ದಿಟ ಮತ್ತು ಸಟೆಗಳ ನಡುವೆ ಗೆರೆಗಳನ್ನು ಸರಿಯಾಗಿ ಎಳೆಯುವದೂ ಸುಲಭವೆನಿಸದ ನಿರೂಪಣೆಗಳು ನಮ್ಮೆದುರಿಗೆ ಇವೆ. ಅದರಲ್ಲೂ ಆಧಾರ ಇಲ್ಲದಿದ್ದರೂ ಸಟೆಯನ್ನೇ ದಿಟವೆಂಬಂತೆ ಪ್ರಸಾರ ಮಾಡುವ ಇಂದಿನ ದಿನಮಾನಗಳಲ್ಲಿ ನಿರೂಪಣೆಗಳನ್ನು ಜರಡಿಯಾಡುವುದು ತುಂಬಾ ಬಿಕ್ಕಟ್ಟಿನ ಕೆಲಸವಾಗಿದೆ. ಹಾಗಿದ್ದರೆ ಚಂದ್ರಶೇಖರ್ ಅವರು ಆಯ್ದುಕೊಂಡಿರುವ ದಾರಿ ಯಾವುದು? ಸಾಮಾನ್ಯವಾಗಿ ಸಮಕಾಲೀನ ದಾಖಲೆ ಮತ್ತು ನಿರೂಪಣೆಗಳನ್ನು ಆಧರಿಸಿ ಅವರು ತಮ್ಮ ನಿರೂಪಣೆಗಳಿಗೆ ಬೇಕಾದ ಚೌಕಟ್ಟನ್ನು ರೂಪಿಸಿಕೊಳ್ಳುತ್ತಾರೆ. ಅಂತಹ ದಾಖಲೆಗಳು ಬೇರೆ ಬೇರೆ ಮೂಲಗಳಲ್ಲಿದ್ದು ಅವುಗಳ ನಡುವೆ ಹೊಂದಾಣಿಕೆ ಇಲ್ಲದಿರುವ ಪ್ರಸಂಗಗಳೂ ಇರುತ್ತವೆ. ಅಂತಹ ಸಂದರ್ಭಗಳಲ್ಲಿ ವಾಸ್ತವವನ್ನು ಹೊರಗೆಳೆಯುವ ದಾರಿಯನ್ನು ಹುಡುಕಿಕೊಳ್ಳಬೇಕಾಗುತ್ತದೆ. ಈ ಬರಹದಲ್ಲೂ ಅದೇ ಮಾದರಿಯನ್ನು ಅನುಸರಿಸಿರುವುದು ಕಂಡುಬರುತ್ತದೆ.











Reviews
There are no reviews yet.