ದ್ಯಾವನೂರು ಹಾಗೂ ಒಡಲಾಳ

ಸಣ್ಣ ಕಥೆಗಳು

In stock

Original price was: ₹114.00.Current price is: ₹103.00.

or

ಖಂಡವಿದೆಕೋ ಮಾಂಸವಿದೆಕೋ ಎನ್ನುತ್ತ ತಮ್ಮ ಕಥೆಗಳನ್ನು ಕನ್ನಡಿಗರಿಗೆ ಕೊಟ್ಟವರು ದೇವನೂರು ಮಹಾದೇವ. ಅಲ್ಲಿಂದ ಕೆಲಕಾಲಕಳೆದ ಮೇಲೆ ‘ಒಡಲಾಳ’ಎಂಬೊಂದು ಕಥೆ ಬರೆದರು. ಒದಿದವರಿಗೆ ಗಂಗು ಹಿಡಿಸುವ ಕಥೆ. ಸಾಕವ್ವ ಅವಳ ಮಕ್ಕಳು ಮೊಮ್ಮಕ್ಕಳು ಕನ್ನಡ ಪ್ರಜ್ಞೆಯೊಳಗೆ ಬಂದು ಕುಳಿತರು. ಸಾಕವ್ವ ಹೇಳುವ ಯಮದವರ ಕತೆಗಾಗಿ ಜಾನಪದ ಪಂಡಿತರು, ಪುಟಗೌರಿ ನವಿಲಿನ ಚಿತ್ರಕ್ಕಾಗಿ ಕಲೆಗಾರರು, ದುಷ್ಟಿಕಮೀಷನರಿಗಾಗಿ ಸಾಹಿತ್ಯ ವಿಮರ್ಶಕರು, ಕತ್ತಲ ಲೋಕದಲ್ಲಿ ಪಳಾರನೆ ಗಡಿಯಾರದ ಮಿಂಚು ಮಿಂಚಿಸುವ ಗುರುಸಿದ್ದನಿಗಾಗಿ ಬಂಡಾಯಗಾರರು ಹುಡಕಾಟ ಮುಂದುವರೆಸಿದ್ದಾರೆ. ಒಡಲಾಳದ ಶಿವು ಈಗ ಈ ಕತೆಯನ್ನು ಓದುತ್ತಿಬಹುದು. ಆ ಕತೆಯಲ್ಲಿ ತನ್ನ ಮಾದರಿಯನ್ನು ಕಂಡುಕೊಳ್ಳುತ್ತಿರಬಹುದು. ಒಡಲಾಳದಂತಹ ಕೃತಿಗಳು ಮಾತ್ರವೇ ಒಂದು ಸಂಸ್ಕೃತಿಯಲ್ಲಿ ಕ್ರಿಯಾವರ್ತಗಳನ್ನು ಹುಟ್ಟಿಹಾಕಬಲ್ಲವು ಎಂಬುದನ್ನು ತಮ್ಮ ಗಮನಕ್ಕೆ ತರುವುದಕ್ಕೆ ಈ ಮಾತು ಹೇಳಿದೆ. ಕೃತಿಯನ್ನು ಅರಿಯಲು ಲೋಕದ ಮಾನದಂಡಗಳನ್ನು ಹುಡುಕುವ ನಮಗೆ ‘ಅಯ್ಯಾ ಹಾಗಲ್ಲ ಈ ಕೃತಿಯ ಮೂಲಕ ಲೋಕವನ್ನು ಅರಿಯಲು ಸಾಧ್ಯವೇ ನೋಡು’ ಎಂದು ಇಂಥ ಕೃತಿಗಳು ಕೇಳುತ್ತವೆ.

Reviews

There are no reviews yet.

Only logged in customers who have purchased this product may leave a review.

Related Products