ಜೀವದನಿ

ಆತ್ಮಕಥನ

In stock

Original price was: ₹150.00.Current price is: ₹135.00.

or
Tags: , , , Categories: SKU: 9788199060265

ಲ್ಯಾಟಿನ್ ಅಮೆರಿಕದ ಭಾಗವಾದ ಚಿಲಿ ದೇಶದ ಇಸಬೆಲ್ ಆಯೆಂದೆ ವಿಶ್ವಮಾನ್ಯ ಲೇಖಕಿ, ಸ್ತ್ರೀವಾದಿ, ಮಹಿಳಾ ಚಳವಳಿಗಳ ಸಂಘಟಕಿ. ತಮ್ಮ ಇಳಿ ವಯಸ್ಸಿನಲ್ಲೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಪರೂಪದ ವ್ಯಕ್ತಿ. ‘ಒಬ್ಬರ ಜೀವನ ಚರಿತ್ರೆಯನ್ನು ಬರೆಯುವುದೆಂದರೆ ದಿನಾಂಕಗಳ, ಘಟನೆಗಳ ಮತ್ತು ಸಾಧನೆಯ ಪಟ್ಟಿ. ವಾಸ್ತವದಲ್ಲಿ ನನ್ನ ಬದುಕಿನ ಮುಖ್ಯ ಸಂಗತಿಗಳು ನಡೆದದ್ದು ಹೃದಯದ ಗುಟ್ಟಿನ ಕೋಣೆಗಳಲ್ಲಿ, ಅವಕ್ಕೆ ಈ ಜೀವನ ಚರಿತ್ರೆಯಲ್ಲಿ ಸ್ಥಾನವಿಲ್ಲ. ನನ್ನ ಗಮನಾರ್ಹ ಸಾಧನೆಗಳೆಂದರೆ ನನ್ನ ಪುಸ್ತಕಗಳಲ್ಲ. ಜನರೊಂದಿಗೆ ಹಂಚಿಕೊಂಡಿರುವ ಪ್ರೀತಿ. ಅದರಲ್ಲೂ ಕುಟುಂಬದವರೊಂದಿಗೆ, ಉಳಿದವರಿಗೆ ಸಹಾಯ ಮಾಡಿರುವ ರೀತಿಯಲ್ಲಿ ಜಗತ್ತಿನಲ್ಲಿ ಎಷ್ಟೊಂದು ನೋವಿದೆ. ಒಂದಿಷ್ಟನ್ನಾದರೂ ನಿವಾರಿಸಲು ಸಾಧ್ಯವೇ ಎಂದು ಯುವತಿಯಾಗಿದ್ದಾಗ ಆಗಾಗ್ಗೆ ಹತಾಶಳಾಗುತ್ತಿದ್ದೆ. ಈಗ ಹಿಂತಿರುಗಿ ನೋಡಿದರೆ. ಕೆಲವು ದಿನಗಳು ಏನನ್ನೂ ಮಾಡಲಾಗದಿದ್ದರೂ ಆತ್ಮತೃಪ್ತಿ ಇದೆ.’ ಇದು ಇಸಬೆಲ್ ಅವರದೇ ಹೇಳಿಕೆ. ಈ ಹೇಳಿಕೆಯ ತಕ್ಕ ಹಾಗೆಯೇ ಅವರ ಬದುಕು ಮತ್ತು ಬರಹ. ಇಸಬೆಲ್ ನಿಜವಾದ ಅರ್ಥದಲ್ಲಿ ಜಾಗತಿಕ ಮಾನ್ಯತೆ ಪಡೆದ ಲೇಖಕಿ, ಅವರ ಇಪ್ಪತ್ತೆಂಟು ಕೃತಿಗಳು ವಿಶ್ವದ ನಲವತ್ತೆರಡು ಭಾಷೆಗಳಿಗೆ ಅನುವಾದಗೊಂಡಿವೆ. ಎಂಬತ್ತು ದಶಲಕ್ಷ ಪ್ರತಿಗಳು ಮಾರಾಟವಾಗಿವೆ. ಹದಿನೈದು ದೇಶಗಳಿಂದ ಅರವತ್ತಕ್ಕೂ ಹೆಚ್ಚು ಪುರಸ್ಕಾರಗಳನ್ನು ಪಡೆದಿದ್ದಾರೆ. ಇವರ ಸಾಹಿತ್ಯ ಕೃತಿಗಳು ಚಲನಚಿತ್ರಗಳಾಗಿವೆ. ಪ್ರಪಂಚದಾದ್ಯಂತವಿರುವ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ‘ದಿ ಇಸಬೆಲ್ ಅಯೆಂದೆ ಫೌಂಡೇಶನ್’ ಅನ್ನು 1995ರಲ್ಲಿ ಸ್ಥಾಪಿಸಿದ್ದಾರೆ.

Reviews

There are no reviews yet.

Only logged in customers who have purchased this product may leave a review.

Related Products