ನೂರು ವರ್ಷಗಳ ಕೆಳಗೆ ಸಣ್ಣಮಕ್ಕಳನ್ನು ಕಟ್ಟಿಕೊಂಡೇ ಪೊಲೀಸರನ್ನೆದುರಿಸಿ ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕೌಟುಂಬಿಕ ಮಹಿಳೆ ಯಶೋಧರಾ ದಾಸಪ್ಪ. ಅವರು ಸ್ವಾತಂತ್ರ್ಯ ಹೋರಾಟ, ಸಮಾಜ ಸೇವೆಗಳಿಗೆ ಸಾಮಾನ್ಯ ಮಹಿಳೆಯರನ್ನು ಎಳೆತಂದು ಸಂಘಟನಾ ಶಕ್ತಿಗೆ ಮಾದರಿಯಾದರು. ನೊಂದವರ ಹೆಗಲಿಗೆ ಹೆಗಲಾಗಿ ಸಂಘಸಂಸ್ಥೆಗಳನ್ನು ರೂಪಿಸಿದರು. ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ನಿಧಿಯ ಕರ್ನಾಟಕ ಶಾಖೆಯನ್ನು ಕಟ್ಟಿ ಬೆಳೆಸಿದರು. ಅರಸೀಕೆರೆಯಲ್ಲಿ ಕಸ್ತೂರಬಾ ಗ್ರಾಮ ನಿರ್ಮಿಸಿದರು. ರಾಜಕಾರಣದಲ್ಲಿ ಸಕ್ರಿಯರಾಗಿ ಚುನಾವಣೆ ಎದುರಿಸಿದರು. ನಾಲ್ಕು ವರ್ಷ ನ್ಯಾಯವಿಧಾಯಕ ಸಭೆಯ ಸದಸ್ಯೆಯಾಗಿದ್ದರು. ಸ್ವಾತಂತ್ರ್ಯಾನಂತರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯಾದರು. ಮೈಸೂರು ನ್ಯಾಯವಿಧಾಯಕ ಸಭೆಗೆ ಸ್ಪರ್ಧಿಸಿ ಗೆದ್ದ ಮೊದಲ ಮಹಿಳೆ (1938-42), ಸ್ವಾತಂತ್ರ್ಯಾನಂತರ ರೂಪುಗೊಂಡ ಎಂಪಿಸಿಸಿ (ಮೈಸೂರು ಪ್ರದೇಶ್ ಕಾಂಗ್ರೆಸ್ ಕಮಿಟಿ)ಯ ಮೊದಲ ಅಧ್ಯಕ್ಷೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಮೊದಲ ಮಹಿಳಾ ಅಧ್ಯಕ್ಷೆ, ಕರ್ನಾಟಕದ ಮೊದಲ ಸಂಪುಟ ದರ್ಜೆ ಸಚಿವೆ ಮುಂತಾಗಿ ಹಲವು ಮೊದಲುಗಳನ್ನು ತಮ್ಮ ಹೆಸರಿನೊಡನೆ ಹೊಂದಿದ ಮೊದಲಗಿತ್ತಿ ಅವರು. (ಕಾಂಗ್ರೆಸ್ ಪಕ್ಷದ ಕರ್ನಾಟಕ ಘಟಕದ ಮೊದಲ ಅಧ್ಯಕ್ಷೆಯಷ್ಟೇ ಅಲ್ಲ, ಏಕೈಕ ಮಹಿಳಾ ಅಧ್ಯಕ್ಷೆಯೂ ಹೌದು. ಯಾಕೆಂದರೆ ಇದುವರೆಗೆ ಮತ್ಯಾರೂ ಆ ಸ್ಥಾನಕ್ಕೆ ಬರಲು ಸಾಧ್ಯವಾಗಿಲ್ಲ.)











Reviews
There are no reviews yet.