ಚುಂಬಕ ಗಾಳಿ

ಲೋಹಿಯಾ ಪ್ರಕಾಶನದ ‘ಅಣ್ಣ’ನನ್ನು ಕುರಿತ ಆಪ್ತ ಬರೆಹಗಳು

Only 1 left in stock

Original price was: ₹100.00.Current price is: ₹90.00.

or

‘ಚುಂಬಕ ಗಾಳಿ’ ಕೃತಿಯು ಚಂದ್ರಕಾಂತ ವಡ್ಡು ಅವರ ಸಂಪಾದಿತ ಚನ್ನಬಸವಣ್ಣನ ಗುಣವಿಶೇಷವನ್ನೊಳಗೊಂಡಿದೆ. ಸಾಹಿತ್ಯ, ಸಂಸ್ಕೃತಿ, ಭಾಷೆ ಮತ್ತು ರಾಜಕೀಯದ ಆಗು ಹೋಗುಗಳನ್ನು ಕುರಿತು ಚನ್ನಬಸವಣ್ಣ ನಿಖರವಾಗಿ, ನಿರಂತರವಾಗಿ ಮಾತನಾಡುವುದನ್ನು ಗಮನಿಸಿದ್ದೇವೆ. ಇಂಥ ಅಪರೂಪದ, ವಿಶಿಷ್ಟ ವ್ಯಕ್ತಿತ್ವವನ್ನು ಕುರಿತು ನಾವು ಈಗಲಾದರೂ ಮಾತನಾಡದಿದ್ದರೆ ಹೇಗೆ…? ಒಂದು ದಿನ ನನ್ನ ಮನದೊಳಗೆ ಇಂತಹದೊಂದು ಪ್ರಶ್ನೆ ತಿವಿಯತೊಡಗಿದಾಗ ಸುಲಭ ಸಹ್ಯವೆನಿಸಲಿಲ್ಲ. ಭಾವಾವೇಶದಲ್ಲಿ ತಕ್ಷಣವೇ ಮಹತ್ವದ ತೀರ್ಮಾನ ತೆಗೆದುಕೊಂಡೇಬಿಟ್ಟೆ.ನಾಡಿನ ಬಗೆಗೆ ಅಷ್ಟೊಂದು ಮಾತನಾಡುವ `ಅಣ್ಣ’ನ ಬಗೆಗೆ ನಾಡು ಇಷ್ಟಾದರೂ ಇನ್ನಾದರೂ ಮಾತನಾಡಬೇಕು ಎಂಬ ಕನಸು ಹೊತ್ತು ಸಹಮನದ ಸ್ನೇಹವಲಯವನ್ನು ಸಂಪರ್ಕಿಸಿದೆ. `ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ ಈ ನಿಟ್ಟಿನ ಪ್ರಯತ್ನಕ್ಕೆ ಕೈಹಾಕಿದ್ದೇನೆ. ಚನ್ನಬಸವಣ್ಣ ಅವರ ವ್ಯಕ್ತಿತ್ವದ ಗುಣವಿಶೇಷ ಮತ್ತು ಮಹತ್ವವನ್ನು ಒಂದು ಪುಟ್ಟ ಪುಸ್ತಕದಲ್ಲಿ ಕಟ್ಟಿಕೊಡುವುದು, ದಾಖಲಿಸುವುದು ನನ್ನ ಉದ್ದೇಶ’ ಎಂದಾಗ ನಾನೇ ಅಚ್ಚರಿಪಡುವಷ್ಟು ಮೆಚ್ಚುಗೆ ವ್ಯಕ್ತವಾಯಿತು ಎಂದು ಸಂಪಾದಕರು ಇಲ್ಲಿ ತಿಳಿಸಿದ್ದಾರೆ.

Reviews

There are no reviews yet.

Only logged in customers who have purchased this product may leave a review.

Related Products