ಚಾರ್ ಮಿನಾರ್

ಸಣ್ಣ ಕಥೆಗಳು

Only 1 left in stock

Original price was: ₹120.00.Current price is: ₹108.00.

or

ಜಯಂತ ಕಾಯ್ಕಿಣಿ ಅವರ ಕಥಾಸಂಕಲನ ‘ಚಾರ್ ಮಿನಾರ್’ –  ಮುಂಬೈ ಎಂಬ ಮಹಾನಗರ ಕುತೂಹಲದ ಕಣ್ಣುಗಳಿಂದ ನೋಡಿದವರು ಅದೆಷ್ಟು ಚಂದ ಅಕ್ಷರಕ್ಕೆ ದುಡಿಸಿಕೊಂಡರೋ? ಮಹಾ ನಗರಗಳಿಗೆ ಹೊಟ್ಟೆಪಾಡಿಗಾಗಿ ಹೊರಟು ನಿಂತಾಗ ಅಲ್ಲಿ ಕಾಣುವುದೆಲ್ಲವೂ ಬದುಕಿನ ನಾಟಕಗಳೆಂದು ಮರೆತು ಬಿಡುತ್ತೇವೆ. ಕಥೆಗಾರ ಹಾಗಲ್ಲ, ಟ್ರಾಫಿಕ್ ಜಾಂ ನ್ನು ಎಂಜಾಯ್ ಮಾಡುತ್ತಾರೆ. ಕಹಿ- ಸಿಹಿ ಘಟನೆಗಳನ್ನು ಕಥೆಯಾಗಿಸುತ್ತಾರೆ. ಬಹುಶಃ ಕಾಯ್ಕಿಣಿಯವರಿಗೆ ಮಾತ್ರ ಒಲಿದಂಥದ್ದು, ಆ ಮಹಾ ನಗರವನ್ನೇ ಫ್ಲೈಯಿಂಗ್ ಕ್ಯಾಮರಾದಂತೆ ದಶ ದಿಕ್ಕುಗಳನ್ನೂ ನೋಡುವ ಅವರ ಗ್ರಹಿಕೆ ಅತಿ ಸೂಕ್ಷ್ಮ. ಒಬ್ಬ ಮಿಡಲ್ ಕ್ಲಾಸ್, ಇನ್ನೊಬ್ಬ ತಳ ವರ್ಗದ ಟಾಕ್ಸಿ ಡ್ರೈವರ್ ಇನ್ನೊಬ್ಬ ಶ್ರೀಮಂತ ಆ ಮಹಾ ಮಳೆಯಲ್ಲಿ ಟ್ರಾಫಿಕ್ ನ ಸಿಕ್ಕಿನಲ್ಲಿ ಬದುಕು ಅರ್ಥೈಸಿಕೊಳ್ಳುವುದೆಷ್ಟು ಚಂದ. ಒಂದು ಮಹಾ ಮಳಡ ಅರ್ಥಾತ್ ನೀರು ಅಷ್ಟು ಸಾಮಾಜಿಕ ಬದಲಾವಣೆ ತರುವ ಆಧುನಿಕ ಶೈಲಿ ಇದು. ನಗರದ ಜಂಜಡಗಳನ್ನೂ ಕಥೆ ಯಾಗಿಸಬಹುದೆಂಬುವುದು ಕಾಯ್ಕಿಣಿಯವರಿಂದ ಕಲಿಬೇಕು. 

Reviews

There are no reviews yet.

Only logged in customers who have purchased this product may leave a review.

Related Products