ಗರುಡಗಂಬದ ದಾಸಯ್ಯ

ಕಥಾಸಂಕಲನ

Only 1 left in stock

Original price was: ₹125.00.Current price is: ₹112.00.

or

ಇಲ್ಲಿಯ ಬರಹದಲ್ಲಿ ಒಂದು ನಯವಾದ ಹಾಸ್ಯವು ಹರಡಿಕೊಂಡಿದೆ. ಅದರಲ್ಲಿ ಹತ್ತು ಮಸಾಲೆ ಕೂಡಿಕೊಂಡಿವೆ. ಇಲ್ಲಿ ಕತೆಯಿದೆ ; ಪಾತ್ರಸೃಷ್ಟಿಯಿದೆ; ನಗೆಯಿದೆ; ನೋವಿದೆ; ಬಣ್ಣನೆಯಿದೆ ; ಬೂಟಾಟವಿದೆ; ಕಟಕಿಯಿದೆ ; ಶಲ್ಯತಂತ್ರವಿದೆ; ಬೇಕಾದರೆ ತತ್ವವಿದೆ ; ಬೇಡಾದರೆ ಹರಟೆಯಿದೆ. ಕಿರುಚಲ ಕಂಟೆಯ ಮೇಲೆ ಹರುಹಿದ ಇಲ್ಲಿಯ ಹಾಸ್ಯದ ಬಿಳಿಬಟ್ಟೆಯ ಕೆಳಗೆ ಯಾವಾವ ಪ್ರಾಣಿಗಳು ಇರುವವೊ ಯಾರು ಹೇಳಬಹುದು? ದಪ್ಪರ ಬಂದಿಯಿಂದ ಹೇಳಿಸಿದ ಶಾನುಭೋಗ ಪುರಾಣದಲ್ಲಿ ಸುಭೇದಾರಿಯ ದಶಾವತಾರಗಳೂ ಕುಣಿದಾಡಿಹೋಗಿವೆ. ಗೊರೂರವರು ಹಾರುವರಾದ್ದರಿಂದ ಅವರಿಗೆ ಆ ಜಾತಿಯ ಸ್ವರೂಪವು ಚೆನ್ನಾಗಿ ತಿಳಿದಿದೆ. ಜೀವನದ ರೌದ್ರ-ಕರುಣ-ಬೀಬತ್ಸ, ಭಯಾನಕಗಳನ್ನು ಕುಸುರು ಕುಸುರಾಗಿ ಅವರು ಮೂಡಿಸಿದ್ದಾರೆ. ಬೇರೆ ಕಿರುಕುಳ ಜೀವನವೂ ಅವರ ಕಣ್ಣಿಂದ ಅಡಗಿಕೊಂಡಿಲ್ಲ. ಹೊಟ್ಟೆಯ ಹೋರಾಟವು ದೇವರ ಮುಸುಕನ್ನು ಹಾಕಿಕೊಂಡರೂ ಅದರ ಹಿಂದೆ ಹಾಸ್ಯದ ಪಂಜನ್ನು ಹಿಡಿದು ಅದರ ಬಿಂಬಸ್ವರೂಪದರ್ಶನವನ್ನು ಮಾಡಿಕೊಡುವ ಮಾತಿನ ಹದವು ಗೊರೂರವರಲ್ಲಿದೆ.”

Reviews

There are no reviews yet.

Only logged in customers who have purchased this product may leave a review.

Related Products