ಯಾವುದೋ ವಿಷಗಳಿಗೆಯಲ್ಲಿ ಪ್ರಕೃತಿಯ ಸಂಚಿಗೆ, ವ್ಯಕ್ತಿಯ ಮೋಹ ಚಾಪಲ್ಯಗಳಿಗೆ ಬಲಿಯಾಗಿ, ತನಗೆ ತಿಳಿಯದಂತೆಯೇ ಪಾತಾಳಕ್ಕೆ ಬಿದ್ದು, ಕ್ಷಣಾರ್ಧದಲ್ಲಿ ಎಚ್ಚರಗೊಂಡು, ವಶ್ಚಾತ್ತಾಪ ತ್ಯಾಗ ಸೇವೆಗಳಿಂದ ತನ್ನನ್ನು ತಾನು ಉದ್ದರಿಸಿಕೊಂಡ ಸೀತಾಲಕ್ಷ್ಮಿಯೆಂಬ ಮಹಿಳೆಯ ಹೃದಯ ವಿದ್ರಾವಕವಾದ ಕರುಣಕಥೆಯೇ ಈ ಕಾದಂಬರಿಯ ವಸ್ತು. ಅಹಲ್ಲೋದ್ಧಾರದ ಕಥೆಗಿಂತ ಸೀತಾಲಕ್ಷ್ಮಿಯ ಕಥೆ ಮಹತ್ವದಲ್ಲಿ ಕಡಿಮೆಯಾದುದೇನಲ್ಲ. ಅದಕ್ಕೆ ಪ್ರತಿಯಾಗಿ ಇದು ಒಂದು ಕೈ ಮಿಗಿಲಾದುದೆಂದೇ ನನ್ನ ಎಣಿಕೆ. ದೇವರಾಜನೆಂಬ ಕುತೂಹಲಕ್ಕೆ ಮರುಳಾಗಿ, ಗೌತಮವೇಷದಿಂದ ಬಂದ ಇಂದ್ರನನ್ನು ತನ್ನಲ್ಲಿಗೆ ಬರಮಾಡಿಕೊಂಡಅಹಲೈ, ತಮ್ಮ ಮಾನರಕ್ಷಣೆ ಮಾಡಬೇಕೆಂದು ಅವನನ್ನು ಬೇಡಿಕೊಂಡಳು.











Reviews
There are no reviews yet.