ಪ್ರಬೀರ ಪುರಕಾಯಸ್ತರ ಬಹು ಅರ್ಥಪೂರ್ಣವಾದ ಕೃತಿಯು ಅನುವಾದದಲ್ಲಿ ಕನ್ನಡಕ್ಕೆ ಬರುತ್ತಿರುವುದು ಅತ್ಯಂತ ಪ್ರಸ್ತುತವಾಗಿದೆ. ಕಾರಣವೆಂದರೆ ಒಂದು ವಿಶಿಷ್ಟ ಬಗೆಯ ಆತ್ಮಕಥನ ಅಥವಾ memoir ಆಗಿರುವ ಈ ಕೃತಿಯು ಎರಡು ತುರ್ತು ಪರಿಸ್ಥಿತಿಗಳ ಬಗ್ಗೆ ಇದೆ. ಒಂದು, ಇಂದಿರಾ ಗಾಂಧಿಯವರು 1975-76ರಲ್ಲಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿ. ಇನ್ನೊಂದು, ಈಗ ನಮ್ಮ ದೇಶದಲ್ಲಿ ಸಂವಿಧಾನಾತ್ಮಕವಾದ ಪ್ರಜೆಗಳ ಹಕ್ಕುಗಳನ್ನು ದಮನಮಾಡಿ ಅವರನ್ನು ಪ್ರಭುತ್ವದ ಹಿಂಸೆಗೆ ಒಡ್ಡುತ್ತಿರುವ ಅಘೋಷಿತ ತುರ್ತು ಪರಿಸ್ಥಿತಿ. ಇವೆರಡರ ನಡುವಿನ ದಶಕಗಳ ಕಥೆ ಇದಾಗಿದೆ; ಏಕಕಾಲಕ್ಕೆ ವೈಯಕ್ತಿಕವಾದ ಹಾಗೂ ಸಾಮುದಾಯಿಕವಾದ ಕಥನವಾಗಿದೆ. ಹೀಗಾಗಿ ಭಾರತದ ರಾಜಕೀಯ ಹಾಗೂ ನಾಗರೀಕ ಸಮುದಾಯಗಳಲ್ಲಿ ಆಗಿರುವ ಆತಂಕಕಾರಿ ಬೆಳವಣಿಗೆಗಳ ವಿಶ್ಲೇಷಣೆಯು ಈ ಕೃತಿಯಲ್ಲಿದೆ.











Reviews
There are no reviews yet.