ಕರಾವಳಿಯ ರಕ್ತ-ಕಣ್ಣೀರು

ಕರಾವಳಿಯಲ್ಲಿ ಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳ ಬಗ್ಗೆ ಅಧ್ಯಯನ.

In stock

Original price was: ₹160.00.Current price is: ₹144.00.

or

ಇದು ಪೊಲೀಸರ ಚಾರ್ಜ್ ಶೀಟ್ ಅಲ್ಲ. ಸುದ್ದಿಗಾರಿಕೆಯಂತೂ ಅಲ್ಲವೇ ಅಲ್ಲ. ಪತ್ರಕರ್ತನೊಬ್ಬ ತನ್ನ ಪೆನ್ನಿಗೆ ಸತ್ಯಶೋಧನೆಯ ಮಸೂರ ಹಿಡಿದು ಪೂರ್ವಗ್ರಹಗಳಿಲ್ಲದೆ ಹೊರಟಾಗ ವಾಸ್ತವ ಬದುಕಿನ ಹಲವು ದಾರುಣ ಕಥೆಗಳು ತೆರೆದುಕೊಳ್ಳುತ್ತವೆ. ಹಾಗಾಗಿ ಈ ಪುಸ್ತಕ ಹಿಡಿದು ಓದಲು ಕುಳಿತಾಗ ಇದು ನಮ್ಮೂರಿನಲ್ಲಿಯೇ ನಡೆದಿದ್ದಾ? ಗೊತ್ತೇ ಇರಲಿಲ್ಲವಲ್ಲ ಎಂಬ ವಿಷಾದ ಹುಟ್ಟಿಸಿ ‘ವಿವೇಕವೇ ಕೊಲೆಯಾಯಿತೇ’ ಎಂಬ ಭಾವವನ್ನು ನಮ್ಮ ಮನಸ್ಸಿನಲ್ಲಿ ಮೂಡಿಸುತ್ತದೆ. ಕೊಲೆಗಳು ಇಷ್ಟು ಸುಲಭವಾಗಿರುವ ಹೊತ್ತಿನಲ್ಲೂ ಇದೊಂಥರ ಅಂತರಂಗದಲ್ಲಿ ಪ್ರೀತಿಯ ಮೊಂಬತ್ತಿ ಹೊತ್ತಿಸುವ ಪ್ರಯತ್ನ. ಈ ಕೃತಿ ಯಾವುದೇ ಅಂತಿಮ ತೀರ್ಪು ನೀಡದೆ ಓದುಗರೊಂದಿಗೆ ಆಪ್ತ ಸಂವಾದ ನಡೆಸುತ್ತದೆ. ಕಥೆಯಲ್ಲದ, ಚಿತ್ರ, ಸುದ್ದಿಯೂ ಆಗಲೊಲ್ಲದ ಇಲ್ಲಿನ ಬರಹಕ್ಕೆ ಸತ್ಯ ಹೇಳುವ ಕಳಕಳಿಯಿದೆ. ಇರ್ಷಾದರ ಬರವಣಿಗೆಗೆ ಪ್ರಾಮಾಣಿಕತೆಯ ಚೌಕಟ್ಟಿದೆ.

  • ಸುಧೀರ್ ಕುಮಾರ್ ಮುರೊಳ್ಳಿ

Reviews

There are no reviews yet.

Only logged in customers who have purchased this product may leave a review.

Related Products