ಬೌದ್ಧಧರ್ಮದ ಮೂಲಭೂತ ತತ್ವಗಳನ್ನು ಅರ್ಥ ಮಾಡಿಕೊಳ್ಳಲು ಇದೊಂದು ಸಮಗ್ರ ಮಾರ್ಗದರ್ಶಿ ಕೃತಿಯಾಗಿದೆ. ಈ ಕೃತಿಯು ಬುದ್ಧನ ಬೋಧನೆಗಳು, ಅವನ ತತ್ವಶಾಸ್ತ್ರ, ನೀತಿಶಾಸ್ತ್ರ ಮತ್ತು ಆಚರಣೆಗಳ ಕುರಿತು ಆಳವಾದ ವಿಶ್ಲೇಷಣೆಯನ್ನು ಒಳಗೊಂಡಿದೆ. ಬೌದ್ಧಧರ್ಮದ ಪ್ರಮುಖ ಪರಿಕಲ್ಪನೆಗಳಾದ ನಾಲ್ಕು ಶ್ರೇಷ್ಠ ಸತ್ಯಗಳು, ಅಷ್ಟಾಂಗಮಾರ್ಗಗಳು ಮತ್ತು ನಿರ್ವಾಣದ ಪರಿಕಲ್ಪನೆಯನ್ನು ಅನ್ವೇಷಿಸುತ್ತದೆ. ಲೇಖಕರು ಬೌದ್ಧಧರ್ಮದ ಸಂಕೀರ್ಣ ವಿಚಾರಗಳನ್ನು ವಿವರಿಸಲು ಸ್ಪಷ್ಟ ಮತ್ತು ಸರಳ ಭಾಷೆಯನ್ನು ಬಳಸಿದ್ದಾರೆ. ಆದ್ದರಿಂದ ಈ ಕೃತಿಯು ಎಲ್ಲ ಓದುಗರಿಗೆ ಸುಲಭವಾಗಿ ಅರ್ಥವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಬೌದ್ಧಧರ್ಮದ ಇತಿಹಾಸವನ್ನು ಭಾರತವೂ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ಬುದ್ಧನ ಚಿಂತನೆಗಳು ಯಾವ ರೀತಿ ಪ್ರಸಾರವಾದವು ಎಂಬುದನ್ನು ಚರ್ಚಿಸಿದೆ. ಬೌದ್ಧಧರ್ಮದ ಬಗ್ಗೆ ಆಳವಾದ ತಿಳಿವಳಿಕೆಯನ್ನು ಪಡೆಯಲು ಮತ್ತು ಇಂದಿನ ಜಗತ್ತಿನಲ್ಲಿ ಬುದ್ದನ ಪ್ರಸ್ತುತತೆಯನ್ನು ಅರಿಯಲು ಬಯಸುವ ಎಲ್ಲರಿಗೂ ಇದು ಒಂದು ಅತ್ಯುತ್ತಮ ಕೃತಿಯಾಗಿದೆ.
ಬಿ. ಸುಜ್ಞಾನಮೂರ್ತಿ











Reviews
There are no reviews yet.